ಮೈಕ್ ನಲ್ಲಿ ಕೂಗಿದ್ರೆ ಮಾತ್ರನ ಅಲ್ಲಾ ಕಿವಿಗೆ ಕೇಳೋದು.? – ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ
ಮಂಗಳೂರು: ಈಗಾಗಲೇ ಅನೇಕ ಬಾರಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ( Farmer Minister KS Eshwarappa ) ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮೈಕ್ ನಲ್ಲಿ ಕೂಗಿದ್ರೇ ಮಾತ್ರವೇನ ಅಲ್ಲಾ ಕಿವಿಗೆ ಕೇಳಿಸೋದು ಎಂಬುದಾಗಿ ವಿವಾದಾತ್ಮಕ ಹೇಳಿದ್ದಾರೆ.
ಮಂಗಳೂರಿನ ಕಾವೂರಿನ ಶಾಂತಿನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಅಜಾನ್ ಕೂಗಲಾಯಿತು. ಈ ವೇಳೆ ನಾನು ಎಲ್ಲಿ ಹೋದ್ರು ಇದೊಂದು ತಲೆನೋವು. ಮೈಕ್ ನಲ್ಲಿ ಕೂಗಿದ್ರೆ ಮಾತ್ರವ ಅಲ್ಲಾಗೆ ಕಿವಿ ಕೇಳೋದು ಎಂಬುದಾಗಿ ಹೇಳಿದರು.
ಆಜಾನ್ ಕೂಗುವ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ, ಈ ಸಮಸ್ಯೆ ಇತ್ಯರ್ಥವಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾವು ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಮಾಡುತ್ತೇವೆ. ಅವರಿಗಿಂತ ನಮಗೂ ಹೆಚ್ಚು ಭಕ್ತಿ ಇದೆ. ಈ ದೇಶದಲ್ಲಿ ಧರ್ಮದ್ದು ಭಾರತ ಎಂದರು.