S S Rajamouli: ತಾವು ಹುಟ್ಟಿದ ಕರ್ನಾಟಕದ ಊರಿಗೆ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾದ ನಿರ್ದೇಶಕ ರಾಜಮೌಳಿ
ನಿರ್ದೇಶಕ ಎಸ್.ಎಸ್. ರಾಜಮೌಳಿ ಸದ್ಯಕ್ಕೆ ಅಮೆರಿಕದಲ್ಲಿದ್ದಾರೆ. ಮಾರ್ಚ್ 12 ರಂದು ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದಲು ತಮ್ಮ’ಆರ್‌ಆರ್‌ಆರ್’ ಚಿತ್ರತಂಡದ ಜೊತೆ ಅವರು ಯುಎಸ್‌ನಲ್ಲಿ ಬೀಡು ಬಿಟ್ಟಿದ್ದಾರೆ.
ಈ ನಡುವೆ ಅವರು ಕರ್ನಾಟಕದ ರಾಯಚೂರಿನ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಪಕ್ಷಗಳು ಮುಂದಿನ ಚುನಾವಣೆಗೆ ಈಗಲೇ ತಯಾರಿ ಮಾಡಿಕೊಳ್ಳುತ್ತಿವೆ. ಈ ವೇಳೆ ಚುನಾವಣಾ ಆಯೋಗ ಕೂಡಾ ಮತದಾರರಲ್ಲಿ ಚುನಾವಣೆ ಬಗ್ಗೆ ಜಾಗೃತಿ ಮೂಡಿಸಲು ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜಮೌಳಿ ಅವರನ್ನು ರಾಯಚೂರು ಜಿಲ್ಲೆಯ ಚುನಾವಣಾ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಎಸ್.ಎಸ್. ರಾಜಮೌಳಿ ಅವರನ್ನು ಚುನಾವಣಾ ರಾಯಭಾರಿಯನ್ನಾಗಿ ನೇಮಕ ಮಾಡಿರುವ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.
ರಾಜಮೌಳಿ ಹುಟ್ಟಿದ್ದು ರಾಯಚೂರು ಜಿಲ್ಲೆಯ ಮಾನ್ವಿ ಬಳಿಯ ಅಮರೇಶ್ವರ ಕ್ಯಾಂಪ್‌ನಲ್ಲಿ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹಾಗೂ ತಾಯಿ ರಾಜ ನಂದಿನಿ ಆಂಧ್ರದಲ್ಲಿ ಭೂಮಿ ಕಳೆದುಕೊಂಡು ಕೆಲವು ವರ್ಷಗಳ ಕಾಲ ಕರ್ನಾಟಕಕ್ಕೆ ಬಂದು ನೆಲೆಸಿದ್ದರು. ರಾಯಚೂರಿನಲ್ಲಿ ಭೂಮಿ ಖರೀದಿಸಿ ವ್ಯವಸಾಯ ಮಾಡುತ್ತಿದ್ದ ಅವರು ಮತ್ತೆ 1977ರಲ್ಲಿ ಕುಟುಂಬ ಸಹಿತ ಆಂಧ್ರಪ್ರದೇಶಕ್ಕೆ ವಾಪಸ್ ತೆರಳಿದರು. ರಾಜಮೌಳಿ, ತಾವು ಹುಟ್ಟಿದ ರಾಯಚೂರು ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ. ಆದ್ದರಿಂದ ಅವರು ಚುನಾವಣಾ ರಾಯಭಾರಿಯಾಗಲು ಒಪ್ಪಿದ್ದಾರೆ. ಅಮೆರಿಕದಿಂದ ಬಂದ ನಂತರ ಜಿಲ್ಲೆಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.ಮತ್ತಷ್ಟು ಮನರಂಜನೆ ಸುದ್ದಿಗಳುಕಾಲಿಗೆ ಗಂಭೀರ ಗಾಯ, ವಾಕರ್ ಸಹಾಯದಿಂದ ನಡೆಯುತ್ತಿರುವ ‘ಅಣ್ಣಾವ್ರು’ ಸಿನಿಮಾ ನಟಿ!
ದರ್ಶನ್ ಜೊತೆ ಅಣ್ಣಾವ್ರು, ಸುದೀಪ್ ಜೊತೆ ಸೈ ಹಾಗೂ ಬಾಲಾಜಿ ರವಿಚಂದ್ರನ್ ಜೊತೆ ರಾಜಕುಮಾರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಕನಿಹಾ ನಿಮಗೆ ನೆನಪಿರಬಹುದು. ಕೆಲವು ದಿನಗಳಿಂದ ಕನಿಹಾ ಕಾಲಿನ ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಅವರು ಲೆಗ್ ಬೂಟ್ಸ್ ಧರಿಸಿ ವಾಕರ್ ಸಹಾಯದಿಂದ ನಡೆಯುತ್ತಿದ್ದಾರೆ. ತಾವು ವಾಕರ್ ಹಿಡಿದು ನಡೆಯುತ್ತಿರುವ ಫೋಟೋವನ್ನು ಕನಿಹಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆನ್‌ಲೈನ್ ವಂಚನೆಗೆ ಬಲಿಯಾದ ನಗ್ಮಾ… ಮೊಬೈಲ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ನಟಿಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಕ್ರೈಂ ಹೆಚ್ಚು ವರದಿಯಾಗುತ್ತಿದೆ. ಎಷ್ಟೇ ಎಚ್ಚರಿಂದ ಇರುವಂತೆ ಮನವಿ ಮಾಡಿದರೂ ಜನರು ಮೋಸ ಹೋಗುತ್ತಲೇ ಇದ್ಧಾರೆ. ಇದೀಗ ಬಹುಭಾಷಾ ನಟಿ ನಗ್ಮಾ ಕೂಡಾ ತಮ್ಮ ಮೊಬೈಲ್‌ಗೆ ಬಂದ ಲಿಂಕ್‌ವೊಂದನ್ನು ಕ್ಲಿಕ್ ಮಾಡಿ ಒಂದು ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ‘ಹೊಯ್ಸಳ’ ರೊಮ್ಯಾಂಟಿಕ್ ಹಾಡು ರಿಲೀಸ್… ಧನಂಜಯ್-ಅಮೃತಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾಸ್ಯಾಂಡಲ್‌ವುಡ್ ನಟರಾಕ್ಷಸ ಡಾಲಿ ಧನಂಜಯ್ ಅಭಿನಯದ ‘ಹೊಯ್ಸಳ’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಪೋಸ್ಟರ್‌ಗಳು, ಟೀಸರ್, ಹಾಡುಗಳು ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ರೊಮ್ಯಾಂಟಿಕ್ ಹಾಡೊಂದು ರಿಲೀಸ್ ಆಗಿದ್ದು, ಇಲ್ಲಿ ಕೂಡಾ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ.