ಚಾಮರಾಜನಗರ
41 ಅಮೆರಿಕನ್ ಡಾಲರ್, 1 ನೇಪಾಳ ಕರೆನ್ಸಿ ಪತ್ತೆ
ಯಳಂದೂರು: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆಯು 3 ತಿಂಗಳ ಬಳಿಕ ನಡೆದಿದ್ದು 28 ಲಕ್ಷದ 10 ಸಾವಿರದ 449 ರೂಪಾಯಿ ಸಂಗ್ರಹವಾಗಿದ್ದು, ವಿದೇಶಿ ಭಕ್ತರು ಡಾಲರ್ ಗಳನ್ನು ಅರ್ಪಿಸಿದ್ದಾರೆ.
ಕಳೆದ 3 ತಿಂಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ 28,10,449 ರೂಪಾಯಿ ಹಣ ಸಂಗ್ರಹವಾಗಿದ್ದು, 41 ಅಮೆರಿಕನ್ ಡಾಲರ್, 5 ರೂಪಾಯಿ ಮೌಲ್ಯದ 01 ನೇಪಾಳ ಕರೆನ್ಸಿ ಕೂಡ ರಂಗನಾಥನಿಗೆ ಭಕ್ತರು ಅರ್ಪಿಸಿದ್ದಾರೆ. ವಿದೇಶಿಗರು ಇಲ್ಲಿನ ಬೆಟ್ಟಕ್ಕೆ ಭೇಟಿ ಕೊಡುವುದರಿಂದ ಹುಂಡಿಯಲ್ಲಿ ಡಾಲರ್ ಪತ್ತೆಯಾಗಿದೆ ಎಂದು ಇಓ ಮೋಹನ್ ಕುಮಾರ್ ತಿಳಿಸಿದ್ದಾರೆ.
ಎಸ್. ಪುಟ್ಟಸ್ವಾಮಿ ಹೊನ್ನೂರು, ಟಿವಿ 8 ಕನ್ನಡ, ಯಳಂದೂರು