ಶಿವಮೊಗ್ಗ
ಯಾರನ್ನು ಹೊರಗಿಡಬೇಕೆಂದು ಮತದಾರರು ತೀರ್ಮಾನಿಸುತ್ತಾರೆ: ಆರಗ ಜ್ಞಾನೇಂದ್ರ
ತೀರ್ಥಹಳ್ಳಿ: ನಿನ್ನೆ ದಿನ ನಡೆದಂತಹ ಪ್ರಜಾ ಭೂಮಿ ಯಾತ್ರೆ ಸಾರ್ವಜನಿಕರ ಸಭೆ ಉದ್ದೇಶಿಸಿ ಮಾತನಾಡುವ ಸಂದರ್ಭ ಡಿ.ಕೆ. ಶಿವಕುಮಾರ್ ರವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ವಿಧಾನಸಭೆಯಿಂದ ಹೊರಗಿಡುವ ಬಗೆ ಮಾತನಾಡಿದ್ದು ಇದಕ್ಕೆ ಗೃಹ ಸಚಿವರಾದ ಜ್ಞಾನೇಂದ್ರ ಪ್ರತಿಕ್ರಿಯೆ ತೀರ್ಥಹಳ್ಳಿ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಅತ್ಯಧಿಕ ಮತಗಳಿಂದ ಜನರು ನನ್ನನ್ನು ಆಶೀರ್ವದಿಸಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಅವರು, ಈ ಬಾರಿ ನನ್ನನ್ನು ವಿಧಾನಸಭೆಯಿಂದ ಹೊರಗಿಡುವ ಬಗ್ಗೆ ಧಾರ್ಷ್ಟ್ಯದ ಮಾತನಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ವಿಧಾನಸಭೆಯಲ್ಲಿ ಯಾರು ಇರಬೇಕು ಅಥವಾ ಇರಬಾರದು ಎನ್ನುವುದನ್ನು ಯಾವುದೇ ಒಬ್ಬ ವ್ಯಕ್ತಿಯು ನಿರ್ಧರಿಸುವುದಿಲ್ಲ, ಬದಲಾಗಿ ಮಹಾ ಜನತೆ ನಿರ್ಧರಿಸುತ್ತಾರೆ. ಅದಕ್ಕೂ ಮುನ್ನವೇ ಮತದಾರರನ್ನು ಅಣಕಿಸುವಂತೆ ಮಾತನಾಡಿರುವ ಶಿವಕುಮಾರ್ ಅವರ ಹೇಳಿಕೆ ಖಂಡಿಸುತ್ತೇನೆ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.