ಚಾಮರಾಜನಗರ
ಮಹರ್ಷಿ ವಾಲ್ಮೀಕಿ ಜಾತ್ರೆಗೆ ಹೊರಟ ಬಸ್ ಗಳಿಗೆ ಶಾಸಕ ಎನ್.ಮಹೇಶ್ ಚಾಲನೆ
ದಾವಣಗೆರೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಎರಡು ದಿನಗಳ ಕಾಲ ನಡೆಯುವ ಐದನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಯಳಂದೂರು ತಾಲ್ಲೂಕಿನ ನಾಯಕ ಸಮುದಾಯದ ಮುಖಂಡರು ಪ್ರಯಾಣ ಬೆಳೆಸಿದ್ದಾರೆ. ಜಾತ್ರೆಗೆ ಹೊರಟ ಬಸ್ ಗಳಿಗೆ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು.
ನಂತರ ಮಾತನಾಡಿ ಅವರು ಇತಿಹಾಸ ಪ್ರಸಿದ್ಧ ವಾಲ್ಮೀಕಿ ಜಾತ್ರೆ ಈ ಬಾರಿ ಸಂಭ್ರಮದಿಂದ ನಡೆಯುತ್ತಿದ್ದು, ರಾಮಾಯಣದ ಕತೆಯನ್ನು ಶಿಲ್ಪ ಚಿತ್ರದಲ್ಲಿ ಕೆತ್ತನೆ ಮಾಡಿರುವ ನೂತನ ತೇರು ಲೋಕಾರ್ಪಣೆಗೊಳ್ಳಲಿದೆ. ನಮ್ಮ ಕ್ಷೇತ್ರದ ಯಳಂದೂರು ತಾಲ್ಲೂಕು ನಾಯಕ ಸಮುದಾಯದ ಮುಖಂಡರು ಈ ದಿನ ಜಾತ್ರೆಗೆ ಹೋಗುತ್ತಿದ್ದು ಸುರಕ್ಷಿತವಾಗಿ ತೆರಳಿ ಜಾತ್ರೆಯನ್ನು ಯಶಸ್ವಿ ಗೊಳಿಸಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಪುಟ್ಟಸ್ವಾಮಿ, tv8 ಕನ್ನಡ, ಯಳಂದೂರು