ನಕಲಿ ವೇಷಭೂಷಣ, ಬಿಲ್ ಹಿಡಿದು ದೇವಸ್ಥಾನದ ಹೆಸರಲ್ಲಿ ವಂಚನೆ
ಮಸ್ಕಿ ಪಟ್ಟಣದ ಆರಾಧ್ಯ ದೈವ ಐತಿಹಾಸಿಕ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರು, ಸ್ವಾಮಿಗಳು ಎಂದು ಬಿಂಬಿಸುವ ನಕಲಿ ವೇಷ ಭೂಷಣ ಧರಿಸಿ ದೇವಸ್ಥಾನದ ವಿವಿಧ ಕಾರ್ಯಕ್ರಮಗಳ ಹೆಸರಲ್ಲಿ ಅಂದರೆ ಕಾರ್ತಿಕ ಮಾಸ, ಶ್ರಾವಣ ಮಾಸ , ಭರತ ಹುಣ್ಣುಮೆ, ಲಕ್ಷ ದೀಪೋತ್ಸವ, ನಿರಂತರ ಅನ್ನ ದಾಸೋಹ ಕಾರ್ಯಕ್ರಮ, ಹೆಚ್ಚುವರಿಯಾಗಿ ದೇವಸ್ಥಾನ ಕಟ್ಟುತ್ತೇವೆ ಎಂದು ಕೆಲ ಕಾವಿಧಾರಿಗಳು ದೇವಸ್ಥಾನದ ಹೆಸರಲ್ಲಿ ನಕಲಿ ರಶೀದಿ ಪುಸ್ತಕ ಮುದ್ರಿಸಿ ಕೊಂಡು ಹೊರರಾಜ್ಯದ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹಳ್ಳಿ ಪಟ್ಟಣಗಳಲ್ಲಿ ಭ್ರಮರಾಂಭ ಮಲ್ಲಿಕಾರ್ಜುನ ಹಾಗೂ ವಿವಿಧ ದೇವಾಲಯ ದೇವರ ಹೆಸರಿನಲ್ಲಿ ಭಕ್ತರಿಂದ ಹಣ ಪಡೆದು ಕೊಂಡು ಜನರಿಗೆ ಸುಳ್ಳು ಹೇಳಿ ಭಕ್ತರಿಗೆ ವಂಚನೆ ಮಾಡುತ್ತಿದ್ದರೆ ಎಂಬ ಆರೋಪ ಕೇಳಿಬಂದಿದೆ.
ಮಸ್ಕಿ ತಾಲ್ಲೂಕಿನ್ಯಾಂದತ ಕೆಲ ವ್ಯಕ್ತಿಗಳು ದೇವಸ್ಥಾನ ಅಭಿವೃದ್ಧಿ ಸಮಿತಿ, ಸೇವಾ ಸಮಿತಿ ಹೆಸರಿನಲ್ಲಿ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದು ಗ್ರಾಮೀಣ, ನಗರ ಪ್ರದೇಶಗಳಿಗೆ ಕಾರು, ಬೈಕು ಹಾಗೂ ಬಸ್ ಗಳಲ್ಲಿ ತೆರಳಿ ಭಕ್ತರಿಗೆ ಸುಳ್ಳು ಹೇಳಿ ಭಕ್ತರನ್ನು ನಂಬಿಸಿ ಸಾವಿರಾರು ರೂ ಹಣ ದೇಣಿಗೆ ಪಡೆದ ಕೊಳ್ಳುತ್ತಿದ್ದಾರೆ. ಸರಿ ಸುಮಾರು ೧೦-೧೫ ವರ್ಷಗಳಿಂದ ಇದೆ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆ ನಕಲಿ ಸ್ವಾಮಿಗಳು ಪೊಲೀಸ್ ಕೈಗೆ ಸಿಕ್ಕಿಬಿದ್ದಾಗ ಎಚ್ಚರಿಕೆ ಕೊಟ್ಟು ಬಿಟ್ಟಿದ್ದಾರೆ. ಆದರೂ ಕೆಲವುರು ಇನ್ನೂ ಅದೇ ಕಾಯಕದಲ್ಲಿ ನಿರತರಾಗಿದ್ದಾರೆ. ನಕಲಿ ರಶೀದಿ ಪುಸ್ತಕ ಮುದ್ರಿಸಿಕೊಂಡು ಕೆಲ ವ್ಯಕ್ತಿಗಳು ಖಾವಿ ಧರಿಸಿಕೊಂಡು ದೇವರ ಹೆಸರಿನಲ್ಲಿ ಭಕ್ತರಿಗೆ ಮೋಸ ಮಾಡುತ್ತಿದ್ದಾರೆ. ಮೋಸದಿಂದ ಸುಳ್ಳು ಹೇಳಿ ಬಂದಂತಹ ಹಣವನ್ನು ಮೋಜಿಗಾಗಿ ಬಳಸುತ್ತಿದ್ದಾರೆ ಎನ್ನಲಾಗ್ತಿದೆ.
ಯಾರಾದರೂ ಭ್ರಮರಾಂಭ ಮಲ್ಲಿಕಾರ್ಜುನ ದೇವರ ಹೆಸರು ಹೇಳಿಕೊಂಡು ಹಣ ಕೇಳಲು ಬಂದರೆ ಸಮೀಪದ ಠಾಣೆಗೆ ದೂರು ನೀಡಬೇಕು ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಅಮರಪ್ಪ ಗುಡುದೂರು ಭಕ್ತರಲ್ಲಿ ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು ನಕಲಿ ರಶೀದಿ ಪುಸ್ತಕ ಮುದ್ರಿಸಿ ಭಕ್ತರಿಗೆ ವಂಚನೆ ಮಾಡುತ್ತಿರುವ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು ಎಂದು ದೇವಸ್ಥಾನ ಸಮಿತಿ ಮನವಿ ಮಾಡಿದ್ದಾರೆ. ಭಕ್ತರು ಇಂತಹ ನಕಲಿ ಸ್ವಾಮಿಗಳಿಂದ ವಂಚನೆಗೆ ಒಳಗಾಗದೆ ಎಚ್ಚರಿಕೆಯಿಂದ ಇರಬೇಕು ಎನ್ನುವುದು ಸಾರ್ವಜನಿಕರ ಆಸೆಯಾಗಿದೆ.
ಸಿದ್ದಯ್ಯ ಹೆಸರೂರು, tv8 ಕನ್ನಡ, ಮಸ್ಕಿ