ಪಾಕ್ ಸ್ಟಾರ್ ಆಟಗಾರ ‘ಬಾಬರ್ ಅಜಮ್, ಶಾಹಿದ್ ಅಫ್ರಿದಿ’ ಆಡುತ್ತಿದ್ದ ಕ್ರೀಡಾಂಗಣ ಬಳಿಯೇ ಪ್ರಬಲ ಬಾಂಬ್ ಸ್ಪೋಟ
tv8kannada| ಪಾಕಿಸ್ತಾನದ ನಾಯಕ ಬಾಬರ್ ಅಝಾಮ್ ಮತ್ತು ಶಾಹಿದ್ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಉನ್ನತ ಕ್ರಿಕೆಟಿಗರು ಆಡುತ್ತಿದ್ದ ರಸ್ತೆಯಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಅವ್ರನ್ನ ಸುರಕ್ಷತವಾಗಿ ಡ್ರೆಸ್ಸಿಂಗ್ ಕೊಠಡಿಗೆ ಕರೆದೊಯ್ಯಲಾಯಿದೆ.
ನವಾಬ್ ಅಕ್ಬರ್ ಬುಗ್ತಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ (PSL) ಪಂದ್ಯದ ವೇಲೆ ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಪಲ್ಪ ಸಮಯದವರೆಗೆ ಪಂದ್ಯ ಸ್ಥಗಿತಗೊಳಿಸಲಾಗಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಭಾನುವಾರ ಹೇಳಿಕೆಯಲ್ಲಿ ದಾಳಿಯ ಜವಾಬ್ದಾರಿಯನ್ನ ವಹಿಸಿಕೊಂಡಿದೆ. ಸ್ಫೋಟದಲ್ಲಿ ಭದ್ರತಾ ಅಧಿಕಾರಿಗಳನ್ನ ಗುರಿಯಾಗಿಸಲಾಗಿದೆ ಎಂದು ಅದು ಹೇಳಿದೆ.
ಪಿಎಸ್‌ಎಲ್ ತಂಡಗಳಾದ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ ಝಲ್ಮಿ ನಡುವಿನ ಪ್ರದರ್ಶನ ಪಂದ್ಯವನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬಲೂಚ್ ಅಭಿಮಾನಿಗಳ ಒತ್ತಡದ ನಂತರ ಆಯೋಜಿಸಿತ್ತು.
ಸ್ಫೋಟ ಸಂಭವಿಸಿದ ತಕ್ಷಣ, ಮುನ್ನೆಚ್ಚರಿಕೆ ಕ್ರಮವಾಗಿ, ಪಂದ್ಯವನ್ನ ನಿಲ್ಲಿಸಲಾಯಿತು ಮತ್ತು ಆಟಗಾರರನ್ನು ಸ್ವಲ್ಪ ಸಮಯದವರೆಗೆ ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಲಾಯಿತು. ನಂತರ, ಗ್ರೀನ್ ಸಿಗ್ನಲ್ ನಂತರ, ಪಂದ್ಯವು ಪುನರಾರಂಭಗೊಂಡಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.