ದೇಶ-ವಿದೇಶ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರು ಯುಎಇಯ ದುಬೈನಲ್ಲಿರುವ ಅಮೇರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ದೀರ್ಘ ಕಾಲದ ಅನಾರೋಗ್ಯದಿಂದ ನಿಧನರಾದರು.

ಅವರಿಗೆ 79 ವರ್ಷ ವಯಸ್ಸಾಗಿತ್ತು.

ಮುಷರಫ್ 11 ಆಗಸ್ಟ್ 1943 ರಂದು ದೆಹಲಿಯಲ್ಲಿ ಜನಿಸಿದರು. ದೇಶ ವಿಭಜನೆಯ ನಂತರ, ಮುಷರಫ್ ಅವರ ಕುಟುಂಬವು ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ನೆಲೆಸಿತು.

ಮುಷರಫ್ ಅವರು 2001 ರಿಂದ 2008 ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸೇನೆಗೆ ಸೇರಿದ ಮುಷರಫ್ ಅಲ್ಲಿ ಹಂತ ಹಂತವಾಗಿ ಉನ್ನತ ಹುದ್ದೆಗೆ ಏರಿದರು. ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.1999 ರಲ್ಲಿ ಅವರು ಸೇನಾ ಮುಖ್ಯಸ್ಥರಾಗಿದ್ದಾಗ ಅವರು ನವಾಜ್ ಷರೀಫ್ ಅವರ ಸರ್ಕಾರದ ವಿರುದ್ಧ ಬಂಡಾಯವೆದ್ದರು. ಎರಡು ವರ್ಷಗಳ ಕಾಲ ಮಿಲಿಟರಿ ಆಡಳಿತಗಾರರಾಗಿ ಸೇವೆ ಸಲ್ಲಿಸಿದ ಮುಷರಫ್ ನಂತರ ಪಾಕಿಸ್ತಾನದ ಅಧ್ಯಕ್ಷರ ಅಧಿಕಾರವನ್ನು ವಹಿಸಿಕೊಂಡರು.

ಷರೀಫ್ ಅಧಿಕಾರಕ್ಕೆ ಮರಳಿದ ನಂತರ, ಮುಷರಫ್ ಪಾಕಿಸ್ತಾನದಿಂದ ಪಲಾಯನ ಮಾಡಿ ದುಬೈ ತಲುಪಿದರು. ಮುಷರಫ್ 2016 ರಿಂದ ದುಬೈನಲ್ಲಿ ಆಶ್ರಯ ಪಡೆಯುತ್ತಿದ್ದರು.

ಮುಷರಫ್ ಅವರ ಮೃತದೇಹವನ್ನು ಅವರ ಕುಟುಂಬದವರು ಪಾಕಿಸ್ತಾನಕ್ಕೆ ತರುತ್ತಾರೆಯೇ ? ಅಥವಾ ಇಲ್ಲವಾ ? ಎಂಬುದು ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಕಳೆದೊಂದು ವರ್ಷದಿಂದಲೂ ಆತನನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲು ಕುಟುಂಬಸ್ಥರು ಯತ್ನಿಸುತ್ತಿದ್ದರು. ಇದಕ್ಕೂ ಮೊದಲು, ಮುಷರಫ್ ತಮ್ಮ ಉಳಿದ ಜೀವನವನ್ನು ತನ್ನ ತಾಯ್ನಾಡಿನಲ್ಲಿ ಕಳೆಯುವ ಮತ್ತು ಸಾಧ್ಯವಾದಷ್ಟು ಬೇಗ ಪಾಕಿಸ್ತಾನಕ್ಕೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಪಾಕಿಸ್ತಾನದ ರಚನೆಯಾದ ನಂತರ, ಭಾರತದಿಂದ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ವಲಸೆ ಹೋದರು. ಈ ಸಂದರ್ಭದಲ್ಲಿ ಮುಷರಫ್ ನಾಲ್ಕು ವರ್ಷದವನಿದ್ದಾಗ ಅವರ ಕುಟುಂಬವೂ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡಿತು. ಮುಷರಫ್ ಅವರ ತಂದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮುಷರಫ್ 18ನೇ ವಯಸ್ಸಿನಲ್ಲಿ ಸೇನೆ ಸೇರಿದರು. ಸೇನಾ ಮುಖ್ಯಸ್ಥರಾಗುವ ಮೊದಲು, ಅವರು ಕಮಾಂಡೋ ಘಟಕದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಮಾರ್ಚ್ 9, 2007 ರಂದು ಪಾಕಿಸ್ತಾನದ ಅಂದಿನ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮುಹಮ್ಮದ್ ಚೌಧರಿ ಅವರನ್ನು ಮುಷರಫ್ ಅಮಾನತುಗೊಳಿಸಿದ್ದು ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು. 2008ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಾಜಕೀಯ ಪಕ್ಷಗಳು ಒತ್ತಡ ಹೇರಿದ್ದವು.ಮತ್ತು ಭಾರತದ ಮೇಲೆ 26/11 ದಾಳಿಗಳು ಸಂಭವಿಸಿ, ಒಂದೇ ವರ್ಷದಲ್ಲಿ ಈ ಎರಡೂ ಘಟಕಗಳು ಸಂಭವಿಸಿದವು. ಅಂದಿನಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟವು.

Related Articles

Leave a Reply

Your email address will not be published. Required fields are marked *

Back to top button