ಅವೈಜ್ಞಾನಿಕ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರ ಎಚ್ಚರಿಕೆ
ನಾರಾಯಣಪುರ ಬಲದಂಡೆ ಕಾಲುವೆ ಪಕ್ಕದ ಸಿ.ಎಚ್ 19.700 ಮೀಟರ್ ದೂರದಲ್ಲಿ ಬರುವ ಕಾಲುವೆ ಪಕ್ಕದಲ್ಲಿ ಅಂಡರ್ ಗ್ರ್ಯಾಂಡ್ ಔಟ್ ಲೇಔಟ್ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆದಾರರ ಡಿ.ವೈ ಉಪ್ಪಾರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರು ಪಟ್ಟಣದ ಸಮೀಪದ ಕಾಳಾಪೂರು ಗ್ರಾಮದ ಬಳಿಯ ನಾರಾಯಣಪುರ ಬಲದಂಡೆ ಕಾಲುವೆ ಪಕ್ಕದ
ಐದನಾಳ ಗ್ರಾಮದ ಈರಪ್ಪ ಹೂಗಾರ ಅವರ ಹೊಲದ ಕಾಲುವೆ ಪಕ್ಕದಲ್ಲಿ ಅಂಡರ್ ಗ್ರ್ಯಾಂಡ್ ಔಟ್ ಲೇಔಟ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ.
ಮಧ್ಯರಾತ್ರಿಯಲ್ಲಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಡಿ.ವೈ ಉಪ್ಪಾರ ಅವರು ಅಂಡರ್ ಗ್ರ್ಯಾಂಡ್ ಔಟ್ ಲೇಔಟ್ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸುತ್ತಿದ್ದು ಭೂಮಿಯ ಕೆಳಭಾಗ ಕೆಸರಿನಿಂದ ಕೂಡಿದ್ದರೂ ಅದರ ಮೇಲೆಯೇ ಕಾಂಕ್ರೀಟ್ ಹಾಕುತ್ತಿರುವುದರಿಂದ ಹೆಚ್ಚು ದಿನ ಈ ಅಂಡರ್ ಗ್ರ್ಯಾಂಡ್ ಔಟ್ ಲೇವೌಟ್ ನಿರ್ಮಾಣ ಬಾಳಿಕೆ ಬರುವುದಿಲ್ಲ ಎಂದು ರೈತರು ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ. ಇಂಥ ಅವೈಜ್ಞಾನಿಕ ಕಾಮಗಾರಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಏಪ್ರಿಲ್ ತಿಂಗಳ 15 ತಾರೀಖಿನ ನಂತರ ಕೆಲಸ ಮಾಡಬೇಕೆಂದು ನಿಯಮ ಇದೆ. ಆದರೆ ಗುತ್ತಿಗೆದಾರ ಡಿ ವೈ ಉಪ್ಪಾರ ಕಂಪನಿಯವರು ಸರ್ಕಾರ ನಿಯಮ ಗಾಳಿಗೆ ತೂರಿ ಕಾಮಗಾರಿ ಮಾಡುತ್ತಿದ್ದ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಗೊತ್ತಿದ್ದರೂ ಸ್ಥಳಕ್ಕೆ ಬಾರದೇ ಅಧಿಕಾರಿಗಳು ನಿರ್ಲಕ್ಷ್ಯ ತೊರೆದಿದ್ದಾರೆ
ರೈತರು ಅಧಿಕಾರಿಗಳ ಮತ್ತು ಗುತ್ತಿಗೆದಾರರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸಲಿಂಗಪ್ಪ ಭಜಂತ್ರಿ, tv8 ಕನ್ನಡ, ಲಿಂಗಸುಗೂರು