ಅಗರ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಅಡ್ಡಿ-ಗ್ರಾಮಸ್ಥರಿಂದ ಪ್ರತಿಭಟನೆ
ಯಳಂದೂರು: ತಾಲೂಕಿನ ಅಗರ ಗ್ರಾಮದಲ್ಲಿ ಗುರುವಾರ ದಲಿತರ ಬಡಾವಣೆಯಲ್ಲಿ ಮಹಾದೇವಯ್ಯ ಎಂಬತ ಮೃತಪಟ್ಟಿದ್ದು ಗ್ರಾಮದ ದಲಿತರಿಗೆ ಸರ್ವೆ ನಂಬರ್ 1949ರಲ್ಲಿ ಸರ್ಕಾರ ರುದ್ರ ಭೂಮಿಯನ್ನು ಮಂಜೂರು ಮಾಡಲಾಗಿದ್ದು ಈ ರುದ್ರ ಭೂಮಿಗೆ ತೆರಳಲು ಸರಿಯಾದ ರೀತಿಯ ರಸ್ತೆ ಸೇತುವೆ ಇಲ್ಲದೆ ಅನೇಕ ವರ್ಷಗಳಿಂದಲೂ ತೊಂದರೆ ಉಂಟಾಗಿದ್ದು ನಾಯಕ ಜನಾಂಗಕ್ಕೆ ಸೇರಿರುವ ಮಹದೇವ ನಾಯಕ,ಹರೀಶ್ ನಾಯ್ಕ ಎಂಬುವರು ಸುವರ್ಣಾವತಿ ನದಿ ದಡದಲ್ಲಿ ಜಮೀನನ್ನು ಹೊಂದಿದ್ದು ಸರ್ಕಾರಿ ಜಾಗವನ್ನು ಅಕ್ರಮ ಮಾಡಿಕೊಂಡು ರುದ್ರ ಭೂಮಿಗೆ ಶವ ಸಂಸ್ಕಾರ ಮಾಡಲು ತೆರಳಲು ದಲಿತ ಜನಾಂಗ ದವರಿಗೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮಗೆ ಶಾಶ್ವತ ಪರಿಹಾರ ನೀಡಬೇಕು ರುದ್ರ ಭೂಮಿಗೆ ಹೋಗಲು ರಸ್ತೆ ಸೇತುವೆ ನಿರ್ಮಿಸಿ ಕೊಡಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ತಹಸಿಲ್ದಾರ್ ಶಿವರಾಜ್, ಸಮಾಜ ಕಲ್ಯಾಣ ಅಧಿಕಾರಿ ಕೇಶವಮೂರ್ತಿ, ತಾಲೂಕ್ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಆಗರ ಮಾಂಬಳ್ಳಿ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ್, ಪಿ ಡಿ ಓ ಮಹಾದೇವಸ್ವಾಮಿ, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರದ ರಮೇಶ್ ಕಂದಾಯ ಇಲಾಖೆ ಸರ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ
ನಂತರ ತಹಸಿಲ್ದಾರ್ ಶಿವರಾಜ್ ಮಾತನಾಡಿ ದಲಿತರ ರುದ್ರಭೂಮಿಗೆ ಭೂಮಿ ಮಂಜೂರಾತಾಗಿದ್ದು ಅಂತ್ಯ ಸಂಸ್ಕಾರಕ್ಕೆ ಯಾರು ಅಡ್ಡಿಪಡಿಸಬಾರದು ರುದ್ರ ಭೂಮಿಗೆ ತೆರಳಲು ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಮುಂದಿನ ದಿನದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ತಾತ್ಕಾಲಿಕವಾಗಿ ಅಂತ್ಯ ಸಂಸ್ಕಾರ ಮಾಡಲು ಗ್ರಾಮ ಪಂಚಾಯತಿ ವತಿಯಿಂದ ಜೆಸಿಬಿ ಮೂಲಕ ಸ್ಥಳದಲ್ಲಿ ಅಧಿಕಾರಿಗಳು ಉಳಿದು ರಸ್ತೆ ಸ್ವಚ್ಛತೆ ಮಾಡಿ ಕೊಡುವ ಮೂಲಕ ಅಂತ್ಯಕ್ರಿಯಕ್ಕೆ ಅಡ್ಡಿಪಡಿಸುತ್ತಿದ್ದ ಪಕ್ಕದ ಜಮೀನ ಮಾಲೀಕರನ್ನು ಸಮಾಧಾನಪಡಿಸಿ ಅಂತ್ಯಕ್ರಿಯಕ್ಕೆ ಅವಕಾಶ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಮೈಸೂರು ವಿಭಾಗದ ಸಂಚಾಲಕರಾದ ದೊಡ್ಡ ಹಿಂದುವಾಡಿ ಸಿದ್ದರಾಜು, ದಲಿತ ಸಂಘಟನೆಯ ತಾಲೂಕು ಸಂಯೋಜಕರಾದ ಅಗರ ರಾಜಪ್ಪ, ಗ್ರಾಮದ ಯಜಮಾನರಾದ ಮಹದೇವಯ್ಯ, ರವಿಕುಮಾರ್, ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಹೆಚ್.ಕುಮಾರ, ಕೆ ಮಹದೇವ, ನಂಜುಂಡಸ್ವಾಮಿ, ಪಾಪಣ್ಣ, ಮಹೇಶ, ಮಹದೇವ,ಶಿವು, ಮಹಾದೇವ ಹಾಗೂ
ಕಂದಾಯ ಇಲಾಖೆ ಸಿಬ್ಬಂದಿಗಳು , ಗ್ರಾಮ ಲೆಕ್ಕಿಗರು ಸರ್ವೆ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ಎಸ್. ಪುಟ್ಟಸ್ವಾಮಿಹೊನ್ನೂರು, ಟಿವಿ 8 ಕನ್ನಡ, ಯಳಂದೂರು