ಟ್ರೆಂಡಿಂಗ್

ಲೋಕಸಭೆಯಲ್ಲಿ ಇಂದು ಮಂಡಿಸಿದ ಕೇಂದ್ರ ಬಜೆಟ್-2023 ಹೈಲೈಟ್ಸ್

* ತಲಾ ಆದಾಯವು ಸುಮಾರು ಒಂಬತ್ತು ವರ್ಷಗಳಲ್ಲಿ ದ್ವಿಗುಣಗೊಂಡು 1.97 ಲಕ್ಷ ರೂ.ಗೆ ತಲುಪಿದೆ.

* ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಗಾತ್ರದಲ್ಲಿ 10ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಹೆಚ್ಚಳವಾಗಿದೆ.
* ಇಪಿಎಫ್‌ಒ ಸದಸ್ಯತ್ವವು 27 ಕೋಟಿಗೆ ದ್ವಿಗುಣಗೊಂಡಿದೆ.

* 2022ರಲ್ಲಿ ಯುಪಿಐ ಮೂಲಕ 126 ಲಕ್ಷ ಕೋಟಿ ರೂ.ಗಳ 7,400 ಕೋಟಿ ಡಿಜಿಟಲ್ ಪಾವತಿಗಳು ನಡೆದಿವೆ.
* ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 11.7 ಕೋಟಿ ಮನೆ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
* ಉಜ್ವಲ ಅಡಿಯಲ್ಲಿ 9.6 ಕೋಟಿ ಎಲ್ ಪಿ ಜಿ ಸಂಪರ್ಕಗಳನ್ನು ಒದಗಿಸಲಾಗಿದೆ.

* ಪ್ರಧಾನಮಂತ್ರಿ ಸುರಕ್ಷಾ ಬಿಮಾ ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಅಡಿಯಲ್ಲಿ 44.6 ಕೋಟಿ ಜನರಿಗೆ ವಿಮೆಯ ರಕ್ಷಣೆ.
* ಪಿಎಂ ಕಿಸಾನ್ ಸಮ್ಮಾನ್ ನಿ ಅಡಿಯಲ್ಲಿ 11.4 ಕೋಟಿ ರೈತರಿಗೆ 2.2 ಲಕ್ಷ ಕೋಟಿ ರೂ. ನಗದು ವರ್ಗಾವಣೆ.
* ಬಜೆಟ್ನ ಏಳು ಆದ್ಯತೆಗಳಾದ ಸಪ್ತರ್ಷಿಗಳೆಂದರೆ, ಅಂತರ್ಗತ ಅಭಿವೃದ್ಧಿ, ಕೊನೆಯ ಮೈಲಿಯನ್ನು ತಲುಪುವುದು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮಥ್ರ್ಯವನ್ನು ಬಳಸಿಕೊಳ್ಳುವುದು, ಹಸಿರು ಬೆಳವಣಿಗೆ, ಯುವ ಶಕ್ತಿ ಮತ್ತು ಹಣಕಾಸು ವಲಯ.
* ಹೆಚ್ಚಿನ ಮËಲ್ಯದ ತೋಟಗಾರಿಕಾ ಬೆಳೆಗಳಿಗೆ ರೋಗರಹಿತ, ಗುಣಮಟ್ಟದ ಬೆಳೆಯ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಲು 2200 ಕೋಟಿ ರೂ. ವೆಚ್ಚದಲ್ಲಿ ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.
* 2014 ರಿಂದ ಸ್ಥಾಪಿತವಾಗಿ ಅಸ್ತಿತ್ವದಲ್ಲಿರುವ 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್

ಕಾಲೇಜುಗಳನ್ನು ಸ್ಥಾಪಿಸಲಾಗುವುದು.
* 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗಾಗಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ಮುಂದಿನ ಮೂರು ವರ್ಷಗಳಲ್ಲಿ ನೇಮಕ ಮಾಡಲಾಗುವುದು.
* ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವೆಚ್ಚವನ್ನು ಶೇ.66 ರಷ್ಟು ಹೆಚ್ಚಳದೊಂದಿಗೆ 79,000 ಕೋಟಿ ರೂ.ಗಳಿಗೆ ಏರಿಸಲಾಗುವುದು
* ರೈಲ್ವೆಗೆ 2.40 ಲಕ್ಷ ಕೋಟಿ ರೂ.ಗಳ ಬಂಡವಾಳವನ್ನು ಒದಗಿಸಲಾಗಿದೆ, ಇದು ಇದುವರೆಗಿನ ಅತಿ ಹೆಚ್ಚು ಮತ್ತು 2013-14ರಲ್ಲಿ ಮಾಡಿದ ವೆಚ್ಚದ ಒಂಬತ್ತು ಪಟ್ಟು ಹೆಚ್ಚಳವಾಗಿದೆ.
* ನಗರ ಮೂಲಸೌಕರ್ಯ ಅಭಿವೃದ್ಧಿ ನಿ (ಯುಐಡಿಎಫ್) ಯನ್ನು ಆದ್ಯತಾ ವಲಯದ ಸಾಲದ ಕೊರತೆಯ ಬಳಕೆಯ ಮೂಲಕ ಸ್ಥಾಪಿಸಲಾಗುವುದು, ಇದನ್ನು ರಾಷ್ಟ್ರೀಯ ವಸತಿ ಬ್ಯಾಂಕ್ ನಿರ್ವಹಿಸುತ್ತದೆ ಮತ್ತು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ನಗರ ಮೂಲಸೌಕರ್ಯವನ್ನು ನಿರ್ಮಿಸಲು ಸಾರ್ವಜನಿಕ ಏಜೆನ್ಸಿಗಳ ಮೂಲಕ ಬಳಸಲಾಗುತ್ತದೆ.
* ದಾಖಲೆಗಳನ್ನು ಆನ್ಲೈನ್ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಎಂಎಸ್‌ಎಂಇಗಳು, ದೊಡ್ಡ ವ್ಯಾಪಾರ ಮತ್ತು ಚಾರಿಟಬಲ್ ಟ್ರಸ್ಟ್ಗಳ ಬಳಕೆಗಾಗಿ ಸಂಸ್ಥೆಗಳ ಡಿಜಿಲಾಕರ್ ಅನ್ನು ಸ್ಥಾಪಿಸಲಾಗುತ್ತದೆ.

* ಹೊಸ ಶ್ರೇಣಿಯ ಅವಕಾಶಗಳು, ವ್ಯಾಪಾರ ಮಾದರಿಗಳು ಮತ್ತು ಉದ್ಯೋಗ ಸಾಮಥ್ರ್ಯವನ್ನು ಬಳಸಿಕೊಳ್ಳಲು 5ಜಿ ಸೇವೆಗಳನ್ನು ಆಧರಿಸಿದ ಅಪ್ಲಿಕೇಶನ್ ಅಭಿವೃದ್ಧಿಗಾಗಿ 100 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.
* 10,000 ಕೋಟಿ ರೂಪಾಯಿಗಳ ಒಟ್ಟು ಹೂಡಿಕೆಯಲ್ಲಿ ಮರುಬಳಕೆ ಆರ್ಥಿಕತೆಯನ್ನು ಉತ್ತೇಜಿಸಲು ಗೋಬರ್ಧನ್ (ಗಾಲ್ವನೈಸಿಂಗ್ ಆರ್ಗಾನಿಕ್ ಬಯೋಆಗ್ರೋ ರಿಸೋರ್ಸಸ್ ಧನ್) ಯೋಜನೆಯಡಿಯಲ್ಲಿ 500 ಹೊಸ ೈವೇಸ್ಟ್ ಟು ವೆಲ್ತ್¿ಘಟಕಗಳನ್ನು ಸ್ಥಾಪಿಸಲಾಗುವುದು. ನೈಸರ್ಗಿಕ ಮತ್ತು ಜೈವಿಕ ಅನಿಲವನ್ನು ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳಿಗೆ 5 ಪ್ರತಿಶತ ಸಂಕುಚಿತ (ಕಂಪ್ರೆಸ್ಡ್) ಜೈವಿಕ ಅನಿಲ ಕಡ್ಡಾಯವನ್ನು ಪರಿಚಯಿಸಲಾಗುವುದು.
* ರೈತರು ಸಹ* ಕೃಷಿಯನ್ನು ಅಳವಡಿಸಿಕೊಳ್ಳಲು ಮುಂದಿನ ಮೂರು ವರ್ಷಗಳಲ್ಲಿ ಒಂದು ಕೋಟಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಇದಕ್ಕಾಗಿ 10,000 ಜೈವಿಕ ಇನ್ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಿ, ರಾಷ್ಟ್ರಮಟ್ಟದ ವಿತರಣಾ ಸೂಕ್ಷ್ಮ ರಸಗೊಬ್ಬರ ಮತ್ತು ಕೀಟನಾಶಕ ಉತ್ಪಾದನಾ ಜÁಲವನ್ನು

* ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಆರಂಭಿಸಲಾಗುವುದು. ಕೋಡಿಂಗ್, ಎಐ, ರೊಬೊಟಿಕ್ಸ್, ಮೆಕಾಟ್ರಾನಿಕ್ಸ್, ಐಒಟಿ, 3ಡಿ ಪ್ರಿಂಟಿಂಗ್, ಡ್ರೋನ್ಸ್ ಮತ್ತು ಸಾಫ್ಟ್ ಸ್ಕಿಲ್ಗಳಂತಹ ಉದ್ಯಮ 4.0 ಗಾಗಿ ಹೊಸ ತಲೆಮಾರಿನ ಕೋರ್ಸ್ಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ ನೀಡಲಾಗುವುದು.
* ಅಂತರರಾಷ್ಟ್ರೀಯ ಅವಕಾಶಗಳಿಗಾಗಿ ಯುವಕರನ್ನು ಸಿದ್ಧಪಡಿಸಲು 30 ಸ್ಕಿಲ್ ಇಂಡಿಯಾ ಅಂತರಾಷ್ಟ್ರೀಯ ಕೇಂದ್ರಗಳನ್ನು ವಿವಿಧ ರಾಜ್ಯಗಳಾದ್ಯಂತ ಸ್ಥಾಪಿಸಲಾಗುವುದು.
* 9,000 ಕೋಟಿ ರೂಪಾಯಿಗಳ ಮರುಭರ್ತಿಯ ಮೂಲಕ 1ನೇ ಏಪ್ರಿಲ್ 2023 ರಿಂದ ಜÁರಿಗೆ ಬರುವಂತೆ ಎಂಎಸ್‌ಎಂಇ ಗಳಿಗೆ ಪರಿಷ್ಕರಿಸಿದ ಸಾಲ ಖಾತ್ರಿ ಯೋಜನೆ. ಈ ಯೋಜನೆಯು 2 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಮೇಲಾಧಾರ ರಹಿತ ಖಾತರಿಯ ಸಾಲವನ್ನು ಒದಗಿಸುತ್ತದೆ ಮತ್ತು ಸಾಲದ ವೆಚ್ಚವನ್ನು ಸುಮಾರು 1 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ.
* ಕಂಪನಿಗಳ ಕಾಯಿದೆಯ ಅಡಿಯಲ್ಲಿ ಕ್ಷೇತ್ರ ಕಚೇರಿಗಳಿಗೆ ಸಲ್ಲಿಸಲಾದ ವಿವಿಧ ನಮೂನೆಗಳ ಕೇಂದ್ರೀಕೃತ ನಿರ್ವಹಣೆಯ ಮೂಲಕ ಕಂಪನಿಗಳಿಗೆ ತ್ವರಿತ ಪ್ರತಿಕ್ರಿಯೆಗಾಗಿ ಸೆಂಟ್ರಲ್ ಪೆÇ್ರಸೆಸಿಂಗ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು.
* ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷದಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.

.

* ಉದ್ದೇಶಿತ ವಿತ್ತೀಯ ಕೊರತೆಯು 2025-26 ರ ವೇಳೆಗೆ ಶೇ.4.5 ಕ್ಕಿಂತ ಕಡಿಮೆ ಇರುತ್ತದೆ.
* ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳಲ್ಲಿ ಕೃಷಿ-ಸ್ಟಾರ್ಟ್‌ಅಪ್ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಯನ್ನು ಸ್ಥಾಪಿಸಲಾಗುವುದು.
* 20 ಲಕ್ಷ ಕೋಟಿ ರೂ. ಕೃಷಿ ಸಾಲವನ್ನು ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ನೀಡಲಾಗುವುದು.
* ಮೀನುಗಾರರು, ಮೀನು ಮಾರಾಟಗಾರರು ಮತ್ತು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸಲು, ಮËಲ್ಯ ಸರಪಳಿ ದಕ್ಷತೆಯನ್ನು ಸುಧಾರಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು 6,000 ಕೋಟಿ ರೂ. ಗುರಿಯ ಹೂಡಿಕೆಯೊಂದಿಗೆ ಪ್ರಧಶಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಹೊಸ ಉಪ-ಯೋಜನೆಯನ್ನು ಪ್ರಾರಂಭಿಸಲಾಗುವುದು.
* ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಮುಕ್ತ ಮೂಲವಾಗಿಸಲು, ಮುಕ್ತ ಗುಣಮಟ್ಟ ಮತ್ತು ಅಂತರ್ ಕಾರ್ಯಸಾಧ್ಯ ಸಾರ್ವಜನಿಕ ಸರಕನ್ನು ಒಳಗೊಂಡ ರೈತ ಕೇಂದ್ರಿತ ಪರಿಹಾರಗಳನ್ನು ಸಕ್ರಿಯಗೊಳಿಸಲು ಮತ್ತು ಕೃಷಿ-ಟೆಕ್ ಉದ್ಯಮ ಮತ್ತು ಸ್ಟಾರ್ಟ್‌ಅಪ್ಗಳ ಬೆಳವಣಿಗೆಗೆ ಬೆಂಬಲ ನೀಡಲು ನಿರ್ಮಿಸಲಾಗುವುದು.

* ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಸೂಕ್ತ ಸಮಯದಲ್ಲಿ ಮಾರಾಟದ ಮೂಲಕ ಲಾಭದಾಯಕ ಬೆಲೆಗಳನ್ನು ಪಡೆಯಲು ಸಹಾಯ ಮಾಡಲು ಬೃಹತ್ ವಿಕೇಂದ್ರೀಕೃತ ಶೇಖರಣಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು.
* ಸಿಕಲ್ ಸೆಲ್ ಅನೀಮಿಯಾ (ವಂಶಪಾರಂರ್ಯವಾಗಿ ಬರುವ ರಕ್ತಹೀನತೆ) ನಿವಾರಣೆ ಅಭಿಯಾನ ಆರಂಭಿಸಲಾಗುವುದು.

Related Articles

Leave a Reply

Your email address will not be published. Required fields are marked *

Back to top button