60 ಲಕ್ಷ ಅನುದಾನದ ಕಾಮಗಾರಿಗೆ ಶಾಸಕ ಎನ್. ಮಹೇಶ್ ಗುದ್ದಲಿ ಪೂಜೆ
ಕೊಳ್ಳೇಗಾಲ: ನಗರಸಭೆ ವ್ಯಾಪ್ತಿಗೆ ಒಳಪಡುವ ಮೂರು ಗ್ರಾಮಗಳಿಗೆ 60 ಲಕ್ಷ ಅನುದಾನದ ಕಾಮಗಾರಿಗೆ ಶಾಸಕ ಎನ್. ಮಹೇಶ್ ಗುದ್ದಲಿ ಪೂಜೆಯನ್ನು ನಡೆಸಿದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ 60 ಲಕ್ಷ ಅನುದಾನದ ಕಾಮಗಾರಿಗೆ ಶಾಸಕ ಎನ್. ಮಹೇಶ್ ರವರು ಉಪ್ಪಾರ ಮೋಳೆಯಲ್ಲಿ ಸಾಂಕೇತಿಕವಾಗಿ ಗುದ್ದಲಿ ಪೂಜೆಯನ್ನು ನಡೆಸಿದರು, ಜೊತೆಗೆ ಕೊಳಗೇರಿಯ 150 ಹೆಚ್ಚು ನಿವಾಸಿಗಳಿಗೆ ನಿವೇಶನದ ಹಕ್ಕು ಪತ್ರವನ್ನು ವಿತರಿಸಿದರು.
ಇದೆ ವೇಳೆ ಶಾಸಕರು ಮಾತನಾಡಿ ಕರ್ನಾಟಕ
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪಟ್ಟಣದ ಮುಡಿಗುಂಡಂ ಗ್ರಾಮದಲ್ಲಿ 20 ಲಕ್ಷ ಕಾಮಗಾರಿ ಬಾಪುನಗರದಲ್ಲಿ 20 ಲಕ್ಷ ಕಾಮಗಾರಿ ಹಾಗೂ ಉಪ್ಪಾರ ಮೋಳೆಯಲ್ಲಿ 20 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ, ಮತ್ತು ಚರಂಡಿ ನಿರ್ಮಾಣ ಹಾಗೂ ಅಗತ್ಯ ಇರುವ ಕಾಮಗಾರಿಗಳನ್ನ ಮಾಡಿಸಿಕೊಳ್ಳಲು 60 ಲಕ್ಷ ಅನುದಾನದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಮಾಡಲಾಗಿದೆ.
ಸ್ಥಳೀಯ ಸದಸ್ಯರುಗಳು ಮುಂದೆ ನಿಂತು ಕಾಮಗಾರಿಗಳನ್ನು ಮಾಡಿಸಿಕೊಳ್ಳಬೇಕು. ಚುನಾವಣೆ ಸಮೀಪಸುತ್ತಿರುವುದರಿಂದ ಅನುಮೋದನೆ ದೊರೆತಿರುವ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಗುತ್ತಿದೆ. ಗ್ರಾಮಸ್ಥರುಗಳು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೊತೆ ಸಹಕರಿಸಿ ತಮ್ಮ ಗ್ರಾಮದಲ್ಲಿ ಅಗತ್ಯ ಇರುವ ಕೆಲಸಗಳನ್ನು ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷೆ ಸುಶೀಲ ಶಾಂತರಾಜು, ಧರಣೇಶ್, ನಗರಸಭೆ ಆಯುಕ್ತ ನಂಜುಂಡಸ್ವಾಮಿ, ನಾಮನಿರ್ದೇಶನ ಸದಸ್ಯ ಸೋಮಣ್ಣ, ಹಾಗೂ ಇನ್ನಿತರರು ಇದ್ದರು,