ಜೇರಟಗಿ ಗ್ರಾಮದಲ್ಲಿ ಗಣರಾಜ್ಯೋತ್ಸವ ಸಂಭ್ರಮ
ಕಲಬುರಗಿ: ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ
ಮರಿ ಕಲ್ಯಾಣ ವ್ಯಾಪಾರ ಸಂಘದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಜುಕುಮಾರ್ ಆರ್ ಮಳಗಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು
ಪ್ರತಿಯೊಬ್ಬ ಭಾರತೀಯ ಸಂಭ್ರಮ ಬಿಡುವ ದಿನ 74ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಮತ್ತು ದೇಶದಲ್ಲಿ 29 ರಾಜ್ಯಗಳು, 07 ರಾಷ್ಟ್ರ ಆಡಳಿತ ರಾಜ್ಯಗಳು,
29 ವೈವಿಧ್ಯಮಯ ರಾಷ್ಟ್ರೀಯ ಹಬ್ಬಗಳು, ಒಂದೇ ಒಂದು ದೇಶ ಪ್ರಪಂಚದ ಏಕೈಕ ಜಾತ್ಯಾತೀತ ರಾಷ್ಟ್ರ ಅದು ನಮ್ಮ ಗಣರಾಜ್ಯವನ್ನು ಗೌರವಿಸುವ ಪ್ರತಿಯೊಬ್ಬ ಪ್ರಜೆಗೂ 74ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಮರಿ ಕಲ್ಯಾಣ ವ್ಯಾಪಾರಿಗಳ ಸೇವಾ ಸಂಘದ ಉಪಾಧ್ಯಕ್ಷ ಅಶೋಕ್ ದಿವಾಣಿ ಮತ್ತು ಹಾಜಿಮಸ್ತಾನ್ ಸೆಕ್, ಕಾರ್ಯದರ್ಶಿ ಶಿವು ಹೂಗಾರ, ಖಜಾಂಚಿ ಮತ್ತು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಶ್ರೀಶೈಲ್ ಕೋಲಾರ್ ಹಾಗೂ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಜೇರಟಗಿ ಗ್ರಾಮದ ಅನೇಕ ವ್ಯಾಪಾರಸ್ಥರು ಧ್ವಜಾರೋಹಣದಲ್ಲಿ ಭಾಗಿಯಾಗಿದ್ದರು.
ಶರಣು ಬಡಿಗೇರ್, tv8 ನ್ಯೂಸ್ ಕನ್ನಡ, ಜೇವರ್ಗಿ