ಚುನಾವಣೆ ಬಹಿಷ್ಕರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ
ಚಳ್ಳಕೆರೆ: ಕಾಡುಗೊಲ್ಲ ಸಮದಾಜಕ್ಕೆ ಚುನಾವಣೆಯೊಳಗೆ ಎಸ್ಟಿ ಮೀಸಲಾತಿ ಘೋಷಣೆ ಮಾಡದಿದ್ದರೆ 2023 ರ ಚುನಾವಣೆಲ್ಲಿ ಕಾಡುಗೊಲ್ಲ ಸಮುದಾಯ ಚುನಾವಣೆ ಬಹಿಷ್ಕರಿಸುವುದಾಗ ಸಮುದಾಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚಳ್ಳಕೆರೆ ತಾಲೂಕಿನ ಕಾಡಿಗೊಲ್ಲ ಸಮಾಜಕ್ಕೆ ಎಸ್‌ಟಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಗೊಲ್ಲ ಸಮುದಾಯದಲ್ಲಿ ಬುಡಕಟ್ಟು ವಿಶೇಷ ಪೂಜೆ ಸಲ್ಲಿಸಿ ಮುಕ್ಯ ರಸ್ತೆಯಿಂದ ನೆಹರು ವೃತ್ತದಲ್ಲಿ ಕಾಡುಗೊಲ್ಲ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಿ ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ನೀಡಿದರು.
ಕಾಡುಗೊಲ್ಲ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲ ಸಮುದಾಯವರನ್ನು ಅಲೆ ಮಾರಿ ಅರೆ ಅಲೆಮಾರಿ ಸಮುದಾಯಗಳ ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿದಬೇಕು. ಮಾಜಿ ಸಿಎಂ ಯಡಿಯೂರಪ್ಪ ಅವಧಿಯಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿದರೂ ನಿಗಮಕ್ಕೆ ಅಧ್ಯಕ್ಷರ ನೇಮಕಾರಿ ಮಾಡಿಲ್ಲ ಬುಡಕಟ್ಟು ಸಮುದಾಯದ ಗೊಲ್ಲ ಸಮುದಾಯಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದ ಈ ಬಾರಿ ಚುನಾವಣೆ ಒಳಗೆ ಎಸ್ಟಿ ಜಾತಿಗೆ ಸೇರಿಸಿದ್ದರೆ ಹಟ್ಟಿಗಳಲ್ಲಿ ನಾಮ ಫಲಕ ಹಾಕುವ ಮೂಲಕ ಚುನಾವಣೆ ಬಹಿಷ್ಕರಿಸುವುದಾಗಿ ಸರಕಾರದ ವಿರುದ್ದ ಗುಡುಗಿದರು.
ಕಾಡುಗೊಲ್ಲ ಸಮಾಜ ಬಹಳ ಹಿಂದುಳಿದ ಸಮಾಜವಾಗಿದೆ. ಸಮುದಾಯಯ ನ್ಯಾಯುತ ಬೇಡಿಕೆಯಾದ ಕಾಡುಗೊಲ್ಲ ಸಮಾಜವನ್ನು ಎಸ್ ಟಿ ಸೇರಿಸುವಂತೆ ಅನೇಕ ಬಾರಿ ಹೋರಾಟ ಮಾಡಿದರೂ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ, ಕಾಡುಗೊಲ್ಲ ಸಮಾಜಕ್ಕೆ ಎಸ್ ಟಿ ಮೀಸಲಾತಿ ನೀಡದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಬುಡಕಟ್ಟು ಸಮುದಾಯದ ಹುಡುಗೆ ತೊಡಿಗೆಯನ್ನು ತೊಟ್ಟು ಆರಾಧ್ಯ ದೈವಗಳಾದ ಜುಜ್ಜಪ್ಪ, ಯತ್ತಪ್ಪ ಸೇರಿದಂತೆ ಪದಗಳನ್ನು ಹಾಡುವ ಮೂಲಕ ಪ್ರತಿಭಟನೆಯಲ್ಲಿ ನೀರಿಕ್ಷೆಗಿಂತ ಹೆಚ್ಚಿನ ಸಖ್ಯೆಯಲ್ಲಿ ಭಾಗವಹಿಸಿದ್ದರು.
ಬೃಹತ್ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಜಯಮ್ಮ ಬಾಲರಾಜು,ಮ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಕಾಡು ಗೊಲ್ಲ ಸಮಾಜದ ಸಾವಿರಾರರು ಜನರು ಇದ್ದರು