ದೀರ್ಘಕಾಲದ ಗೆಳತಿ ಆಥಿಯಾ ವರಿಸಿದ ಕ್ರಿಕೆಟಿಗ ಕೆಎಲ್ ರಾಹುಲ್
ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದರು.
ಮುಂಬೈನ ಕಾಂಡ್ಲಾ ಫಾರ್ಮ್ ಹೌಸ್ ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಕ್ರಿಕೆಟ್ ನ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದ ಸಮಾರಂಭದಲ್ಲಿ ದೀರ್ಘಕಾಲದ ಗೆಳತಿ ಆಥಿಯಾ ಅವರನ್ನು ರಾಹುಲ್ ವರಿಸಿದರು.
ಮೂರು ದಿನಗಳ ಕಾಲ ನಡೆದ ಸಂಗೀತ, ಮೆಹೆಂದಿ ಸೇರಿದಂತೆ ಕಾರ್ಯಕ್ರಮಗಳಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಜನವರಿ 23 ಅಂದರೆ ಸೋಮವಾರ ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಮುಹೂರ್ತದಲ್ಲಿ ಆಥಿಯಾಗೆ ಕೆಎಲ್ ರಾಹುಲ್ ತಾಳಿ ಕಟ್ಟಿದರು.
ಮದುವೆ ಸಮಾರಂಭದಲ್ಲಿ ಅನುಪಮ್ ಖೇರ್, ಇಶಾಂತ್ ಶರ್ಮ, ಕೃಷ್ಣ ಶ್ರಾಫ್ ಮುಂತಾದವರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ಸಂಜೆ ನಡೆಯುವ ರಿಸೆಪ್ಷೆನ್ ನಲ್ಲಿ ಬಾಲಿವುಡ್ ಹಾಗೂ ಕ್ರಿಕೆಟ್ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಪುಣ್ಯ ಗೌಡ ಸ್ಪೋರ್ಟ್ ಬ್ಯುರೋ tv 8kannada ಬೆಂಗಳೂರು