ತಾಲ್ಲೂಕು ಪತ್ರಕರ್ತರ ಸಂಘದ ಕ್ಯಾಲೆಂಡರ್ ಬಿಡುಗಡೆ
ಯಳಂದೂರು: ತಾಲ್ಲೂಕು ಪತ್ರಕರ್ತರ ಸಂಘದ ನೂತನ ವರ್ಷದ ಕ್ಯಾಲೆಂಡರ್ ನ್ನು ದಕ್ಷ ಪೊಲೀಸ್ ಅಧಿಕಾರಿಯಾಗಿ ಜನ ಮನ್ನಣೆ ಗಳಿಸಿರುವ ರಾಷ್ಟ್ರಪತಿ ಪದಕ ಪುರಸ್ಕೃತರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೆತ್ರದ ಅಭ್ಯರ್ಥಿ ಬಿ. ಪುಟ್ಟಸ್ವಾಮಿರವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಬಿ. ಪುಟ್ಟಸ್ವಾಮಿರವರು ಸಂಘಕ್ಕೆ ಶುಭ ಹಾರೈಸಿ ವಾಸ್ತವ ಸುದ್ದಿಯನ್ನು ಬಿತ್ತರ ಮಾಡುವ ಮೂಲಕ ಎಲ್ಲಾರನ್ನು ಜಾಗೃತಗೊಳಿಸುತ್ತಿರುವ ಪತ್ರಕರ್ತ ಮಿತ್ರರಿಗೆ ಒಳ್ಳೆದಾಗಲಿ, ನಿಮ್ಮ ಸಂಘ ಎತ್ತರಕ್ಕೆ ಬೆಳೆದು ಸಮಾಜ ಸೇವೆ ಮಾಡುವಂತೆ ಆಗಲಿ ಎಂದು ಶುಭ ಕೋರಿದರು. ನಂತರ ಪತ್ರಕರ್ತರ ಸಂಘದ ಕಚೇರಿಯಲ್ಲಿ ರಾಷ್ಟ್ರಪತಿ ಪದಕ ಪಡೆದ ಹಿನ್ನಲೆ ಬಿ. ಪುಟ್ಟಸ್ವಾಮಿ ರವರಿಗೆ ಸಂಘದ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯಳಂದೂರು ತಾಲ್ಲೂಕು ಪತ್ರಕರ್ತರ ಸಂಘದ ಗೌರವ ಅಧ್ಯಕ್ಷರು ಎಸ್ ಪುಟ್ಟಸ್ವಾಮಿ ಹೊನ್ನೂರು, ಅಧ್ಯಕ್ಷರು ಮಣಿಕಂಠನಾಯಕ. ಹೆಚ್. ಡಿ,ಖಜಾಂಚಿ ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಆರ್ ಉಮೇಶ್, ಸದಸ್ಯ ಹರೀಶ್. ಸಿ ಮತ್ತು ಬಿ.ಪುಟ್ಟಸ್ವಾಮಿ ಅಭಿಮಾನಿ ಬಳಗದ ಅಗ್ರಹಾರ ಸಿದ್ದರಾಜನಾಯಕ,ಪ್ರಕಾಶ್,ಕೃಷ್ಣ,ಗಿರೀಶ್, ಮನು ಸುರೇಶ್, ಅಲ್ತಾಪ್ ಮುಖಂಡರು ಹಾಜರಿದ್ದರು…..
ಎಸ್. ಪುಟ್ಟಸ್ವಾಮಿ ಹೊನ್ನೂರು, ಟಿವಿ 8ಕನ್ನಡ, ಯಳಂದೂರು